RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Saturday, January 1, 2022

ರೈಲ್ವೆ Group D ಹುದ್ದೆ ಪರೀಕ್ಷೆಗೆ ಪಠ್ಯಕ್ರಮ ಏನು? ಸ್ಮಾರ್ಟ್‌ ಸ್ಟಡಿ ಹೇಗಿರಬೇಕು?., ಇಲ್ಲಿ ತಿಳಿಯಿರಿ

  SHOBHA       Saturday, January 1, 2022

ರೈಲ್ವೆ Group D ಹುದ್ದೆ ಪರೀಕ್ಷೆಗೆ ಪಠ್ಯಕ್ರಮ ಏನು? ಸ್ಮಾರ್ಟ್‌ ಸ್ಟಡಿ ಹೇಗಿರಬೇಕು?., ಇಲ್ಲಿ ತಿಳಿಯಿರಿ



RRB Group D Preparation : ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳು ಇರುತ್ತದೆ. ಸಿಬಿಟಿ ಪರೀಕ್ಷೆಯು 90 ನಿಮಿಷ ಇರುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಇಂಡಿಯನ್‌ ರೈಲ್ವೆಯು ಅಧಿಸೂಚನೆ ಸಂಖ್ಯೆ RRB Group D - 01/2019 ಗೆ ಸಂಬಂಧಿಸಿದಂತೆ ಒಟ್ಟು 1,03,769 ಗ್ರೂಪ್‌ ಡಿ ಹುದ್ದೆಗಳಿಗೆ ಫೆಬ್ರುವರಿ 23 ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಗೆ ಇನ್ನು 2 ತಿಂಗಳಷ್ಟೇ ಬಾಕಿ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸೂಕ್ತ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು, ಉತ್ತಮ ರ್ಯಾಂಕ್‌ನೊಂದಿಗೆ ಹುದ್ದೆ ಗಿಟ್ಟಿಸಲು ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಕನ್ನಡ ದಲ್ಲಿ ವೀಡಿಯೊ ಗಳು

ಆರ್‌ಆರ್‌ಬಿ ಗ್ರೂಪ್ ಡಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿ ಹೇಗಿರುತ್ತದೆ. ಯಾವ್ಯಾವ ಸೆಕ್ಷನ್‌ಗಳಲ್ಲಿ ಎಷ್ಟು ಪ್ರಶ್ನೆಗಳಿರುತ್ತವೆ ಎಂದು, ಪರೀಕ್ಷೆ ಸಮಯ ಎಷ್ಟು, ನೆಗೆಟಿವ್ ಮಾರ್ಕಿಂಗ್‌ ಇರುತ್ತದೆಯೇ ಎಂದು ಮೊದಲು ತಿಳಿದುಕೊಳ್ಳಿ. ಪರೀಕ್ಷೆ ಮಾದರಿ ಮತ್ತು ಆಯ್ಕೆ ಪ್ರಕ್ರಿಯೆ ತಿಳಿಯಲು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿರಿ.


ಆರ್‌ಆರ್‌ಬಿ ಗ್ರೂಪ್‌ ಪರೀಕ್ಷೆಯಲ್ಲಿ ಪ್ರಮುಖವಾಗಿ ನಾಲ್ಕು ಸೆಕ್ಷನ್‌ಗಳಲ್ಲಿ ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳಾಗುತ್ತದೆ. ಆ ಸೆಕ್ಷನ್‌ಗಳ ಪಠ್ಯಕ್ರಮವನ್ನು ತಿಳಿದುಕೊಳ್ಳಿ.


ಗ್ರೂಪ್ ಡಿ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುವ ಪ್ರಮುಖ ನಾಲ್ಕು ಸೆಕ್ಷನ್‌ಗಳೆಂದರೆ..

1)ಸಾಮಾನ್ಯ ವಿಜ್ಞಾನ:25

2)ಗಣಿತ:25

3)ಮೆಂಟಲ್ ಎಬಿಲಿಟಿ ಮತ್ತು ರೀಸನಿಂಗ್:30

4)ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು:20



​ಸಾಮಾನ್ಯ ವಿಜ್ಞಾನ ಪಠ್ಯ ವಿಷಯಗಳು:


1.ಸಾಮಾನ್ಯ ವಿಜ್ಞಾನ ವಿಷಯದ ಪ್ರಶ್ನೆಗಳು 10, 12ನೇ ತರಗತಿಯ ಹಂತಗಳದ್ದಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಹೈಸ್ಕೂಲ್‌ ಮತ್ತು ಪಿಯು ಹಂತದ ಪುಸ್ತಕಗಳನ್ನು ಓದಬಹುದು. ಎಲ್ಲ ಪ್ರಮುಖ ಚಾಪ್ಟರ್‌ಗಳನ್ನು ಒಮ್ಮೆ ಪುನರಾವರ್ತನೆ ಮಾಡಿಕೊಳ್ಳಿ.


  • ಜೀವ ವೈವಿಧ್ಯ
  • ಜೀವನ ಪ್ರಕ್ರಿಯೆಗಳು
  • ಪರಿಸರ ವಿಜ್ಞಾನ
  • ಶಕ್ತಿಯ ಮೂಲಗಳು
  • ಸಂತಾನೋತ್ಪತ್ತಿ
  • ಅನಿಲದ ಮೂಲಗಳು ಮತ್ತು ಲವಣಗಳು
  • ಲೋಹಗಳು ಮತ್ತು ಅಲೋಹ ವಸ್ತುಗಳು
  • ರಸಾಯನಿಕ ಪ್ರತಿಕ್ರಿಯೆಗಳು
  • ಘಟಕಗಳು ಮತ್ತು ಮಾಪನಗಳು
  • ಶಾಖ
  • ಒತ್ತಡ
  • ವಿದ್ಯುತ್ ಮತ್ತು ಕಾಂತೀಯತೆ
  • ಗುರುತ್ವಾಕರ್ಷಣೆ


2.​ಗಣಿತ ವಿಷಯ ಅಧ್ಯಯನಕ್ಕೆ ಸಲಹೆಗಳು


ರೈಲ್ವೆ ಗ್ರೂಪ್ ಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 25 ಅಂಕಗಳಿಗೆ ಗಣಿತ ವಿಷಯದಿಂದ ಪರೀಕ್ಷೆ ಇರುತ್ತದೆ. ಅಭ್ಯರ್ಥಿಗಳು ಸೂತ್ರಗಳನ್ನು ತಿಳಿದಿರಬೇಕು. ಲೆಕ್ಕವನ್ನು ಶಾರ್ಟ್‌ಕಟ್‌ನಲ್ಲಿ ಬೇಗ ಬಗೆಹರಿಸಲು ತಿಳಿದಿರಬೇಕು. ಅದಕ್ಕಾಗಿ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಗಣಿತ ವಿಷಯದಲ್ಲಿ ನಿಮ್ಮ ವೀಕ್‌ ಟಾಪಿಕ್‌ಗಳ ಬಗ್ಗೆ ಗಮನಹರಿಸಿ.


  • ಬಡ್ಡಿ ಲೆಕ್ಕಚಾರಗಳು
  • ಅನುಪಾತ ಮತ್ತು ಪ್ರಮಾಣ
  • ಸಮಯ ಮತ್ತು ಕೆಲಸ
  • ಬೀಜಗಣಿತ
  • ರೇಖಾಗಣಿತ
  • ತ್ರಿಕೋನಮಿತಿ

Total syllabus:

Number system

BODMAS

Decimals

Fractions

LCM

HCF

Ratio and Proportion

Percentages

Mensuration

Time and Work

Time and Distance

Simple and Compound Interest

Profit and Loss

Algebra

Geometry and Trigonometry

Elementary Statistics

Square root

Age

Calculations

Calendar & Clock

Pipes & Cistern etc.

3.​ರೀಸನಿಂಗ್ ಮತ್ತು ಮೆಂಟಲ್ ಎಬಿಲಿಟಿ

ಜೆನೆರಲ್ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್‌ ಸೆಕ್ಷನ್‌ನಲ್ಲಿ 30 ಪ್ರಶ್ನೆಗಳು ಇರುತ್ತವೆ. ಅಭ್ಯರ್ಥಿಗಳು ಈ ಸೆಕ್ಷನ್‌ನಲ್ಲಿ ಯಾವ ಟಾಪಿಕ್‌ಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿದುಕೊಳ್ಳಿ. ಅದಕ್ಕಾಗಿ ಈ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ರೆಫರ್‌ ಮಾಡಿರಿ.


  • ಅನಾಲಜಿ
  • ಕ್ಲಾಸಿಫಿಕೇಶನ್‌
  • ರಕ್ತಸಂಬಂಧಗಳು
  • ದಿಕ್ಕುಗಳು
  • ಅನಾಲಿಟಿಕಲ್
  • ರೀಸನಿಂಗ್
  • ಊಹೆಗಳು
  • ಇತರೆ

Total syllabus:

Analogies

Alphabetical and Number Series

Coding and Decoding

Mathematical operations

Relationships

Syllogism

Jumbling

Venn Diagram

Data Interpretation and Sufficiency

Conclusions and Decision making

Similarities and Differences

Analytical Reasoning

Classification

Directions

Statement – Arguments and

Assumptions etc.

4.​ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು

  • Science & Technology
  • Sports
  • Culture
  • Personalities
  • Economics
  • Politics 

ಈ ಸೆಕ್ಷನ್‌ನಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನವನ್ನು ಚೆಕ್‌ ಮಾಡಲಾಗುತ್ತದೆ. ಅಭ್ಯರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳನ್ನು ಸಹ ತಿಳಿದುಕೊಂಡಿರಬೇಕು. ಉಳಿದಂತೆ ಸಾಮಾಜಿಕ, ತಂತ್ರಜ್ಞಾನ, ಸಾಂಸ್ಕೃತಿಕ, ಆರ್ಥಿಕ ಮತ್ತು ಇತರೆ ಕ್ಷೇತ್ರಗಳ ಹಾಗೂ-ಹೋಗುಗಳ ಬಗ್ಗೆಯೂ ತಿಳಿದುಕೊಂಡಿರಬೇಕು.

ಈ ಸೆಕ್ಷನ್‌ಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಪ್ರಚಲಿತ ವಿದ್ಯಮಾನಗಳ ಕುರಿತು ವಿಡಿಯೋ, ನಿಯತಕಾಲಿಕೆಗಳು, ದಿನಪತ್ರಿಕೆಗಳ ಮೂಲಕ ತಯಾರಿ ನಡೆಸಬಹುದು.

ಹೆಚ್ಚು ಅಭ್ಯಾಸ ಮತ್ತು ಓದುವುದು ಹೆಚ್ಚು ಅಂಕಗಳಿಸಲು ಇರುವ ಒಂದೇ ಮಾರ್ಗ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಪ್ರ್ಯಾಕ್ಟೀಸ್ ಮಾಡಿ. ನಿಮ್ಮ ವೀಕ್‌ ಸೆಕ್ಷನ್‌ಗಳ ಬಗ್ಗೆಯೂ ಗಮನಹರಿಸಿ ಅಭ್ಯಾಸ ಮಾಡಿ. ಅಣಕು ಪರೀಕ್ಷೆಗಳನ್ನು ತೆಗೆದುಕೊಂಡು ತಪ್ಪುಗಳನ್ನು ಅರಿಯಿರಿ. ಥಿಯರಿಗಳು ಮತ್ತು ಕಾನ್‌ಸೆಪ್ಟ್‌ಗಳ ಬಗ್ಗೆ ತಿಳಿದುಕೊಳ್ಳಿ

ಹೆಚ್ಚು ತಿಳಿದಿರುವ ವಿಷಯ ಬಿಟ್ಟು, ಪರೀಕ್ಷೆಗೆ ತಿಳಿಯಬೇಕಾದ, ನೀವು ತಿಳಿಯದ ವಿಷಯಗಳಿಗೆ ಮೊದಲ ಆಧ್ಯತೆ ನೀಡಿ ವೇಳಾಪಟ್ಟಿ ಹಾಕಿಕೊಂಡು ಓದಿರಿ. ಈಗಾಗಲೇ ಓದಿದ ವಿಷಯಗಳನ್ನು ಪುನರಾವರ್ತನೆ ಮಾಡಿಕೊಳ್ಳಿ. ವಿಷಯವಾರು ಓದುವಿಕೆಗೆ ನಿರ್ಧಿಷ್ಟ ಸಮಯಗಳನ್ನು ನೀಡಿ.




logoblog

Thanks for reading ರೈಲ್ವೆ Group D ಹುದ್ದೆ ಪರೀಕ್ಷೆಗೆ ಪಠ್ಯಕ್ರಮ ಏನು? ಸ್ಮಾರ್ಟ್‌ ಸ್ಟಡಿ ಹೇಗಿರಬೇಕು?., ಇಲ್ಲಿ ತಿಳಿಯಿರಿ

Previous
« Prev Post

No comments:

Post a Comment