RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Sunday, January 9, 2022

ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಆಯ್ಕೆ ಪ್ರಕ್ರಿಯೆಗಳೇನು? ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?

  SHOBHA       Sunday, January 9, 2022

 ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಆಯ್ಕೆ ಪ್ರಕ್ರಿಯೆಗಳೇನು? ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?



ರೈಲ್ವೆ ನೇಮಕಾತಿ ಮಂಡಳಿಯ ಗ್ರೂಪ್‌ ಡಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಮಾದರಿ, ನೇಮಕ ಪ್ರಕ್ರಿಯೆಯಲ್ಲಿ ಯಾವೆಲ್ಲಾ ಹಂತಗಳು ಇರುತ್ತವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಮಾದರಿ ತಿಳಿದು ಗ್ರೂಪ್‌ ಡಿ ಪರೀಕ್ಷೆಗೆ ಸಿದ್ಧತೆ ನಡೆಸಿ.

ಭಾರತೀಯ ರೈಲ್ವೆಯು ಅಧಿಸೂಚನೆ ಸಂಖ್ಯೆ RRB Group D - 01/2019 ಗೆ ಸಂಬಂಧಿಸಿದಂತೆ ಒಟ್ಟು 1,03,769 ಗ್ರೂಪ್‌ ಡಿ ಹುದ್ದೆಗಳಿಗೆ ಫೆಬ್ರುವರಿ 23 ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆ ಮಾದರಿ ಹೇಗಿರುತ್ತದೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳಿ.

ಪರೀಕ್ಷೆಗೆ ಇನ್ನೂ ಎರಡು ತಿಂಗಳು ಬಾಕಿ ಇದ್ದು, ಅಭ್ಯರ್ಥಿಗಳು ಉತ್ತಮ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅಧ್ಯಯನ ಮಾಡಲು ಈ ಮಾಹಿತಿಗಳು ಅನುಕೂಲ.


ಇದನ್ನು ಓದಿರಿ :

ರೈಲ್ವೆ Group D ಹುದ್ದೆ ಪರೀಕ್ಷೆಗೆ ಪಠ್ಯಕ್ರಮ ಏನು? ಸ್ಮಾರ್ಟ್‌ ಸ್ಟಡಿ ಹೇಗಿರಬೇಕು?., ಇಲ್ಲಿ ತಿಳಿಯಿರಿ

1)ರೈಲ್ವೆ ಗ್ರೂಪ್‌ ಡಿ ಹುದ್ದೆ ಆಯ್ಕೆ ಪ್ರಕ್ರಿಯೆ:


ರೈಲ್ವೆ ಗ್ರೂಪ್‌ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳು ಇರುತ್ತದೆ. ರೈಲ್ವೆಯು ಗ್ರೂಪ್‌ ಡಿ ಹುದ್ದೆಗೆ ಸಿಬಿಟಿ ಪರೀಕ್ಷೆಯನ್ನು ಕೇವಲ ಒಂದು ಹಂತದಲ್ಲಿ ಅಥವಾ ಎರಡು ಹಂತದಲ್ಲಿ ನಡೆಸುವ ಹಕ್ಕನ್ನು ಹೊಂದಿರುತ್ತದೆ.


2)ರೈಲ್ವೆ ಗ್ರೂಪ್‌ ಡಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿ:


ಸಿಬಿಟಿ ಪರೀಕ್ಷೆಯು 90 ನಿಮಿಷ ಇರುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. PwBD ಅಭ್ಯರ್ಥಿಗಳಿಗೆ ಸಿಬಿಟಿ ಪರೀಕ್ಷೆಯು 120 ನಿಮಿಷ ಇರುತ್ತದೆ. ಯಾವ್ಯಾವ ಸೆಕ್ಷನ್‌ನಲ್ಲಿ ಎಷ್ಟು ಅಂಕಗಳಿಗೆ, ಎಷ್ಟು ಪ್ರಶ್ನೆಗಳು ಇರುತ್ತವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

3)ಯಾವ್ಯಾವ ಸೆಕ್ಷನ್‌ಗಳಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ?


  • ಸಾಮಾನ್ಯ ವಿಜ್ಞಾನ - 25
  • ಗಣಿತ - 25
  • ಮೆಂಟಲ್ ಎಬಿಲಿಟಿ ಮತ್ತು ರೀಸನಿಂಗ್ - 30
  • ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು: 20
  • ಒಟ್ಟು 100 ಅಂಕಗಳಿಗೆ 100 ಪ್ರಶ್ನೆಗಳು ಇರುತ್ತವೆ.


4)​ಪ್ರಮುಖ ಸೂಚನೆಗಳು

ಪ್ರಶ್ನೆ ಪತ್ರಿಕೆಯು ಆಬ್ಜೆಕ್ಟಿವ್‌ಟೈಪ್- ಮಲ್ಟಿಪಲ್‌ ಚಾಯ್ಸ್‌ ಪ್ರಶ್ನೆಗಳನ್ನು ಹೊಂದಿರುತ್ತದೆ.

ಪ್ರತಿ ಪ್ರಶ್ನೆಗೆ 1 ಅಂಕಗಳಿರುತ್ತವೆ.

1/3 ಅಂಕಗಳನ್ನು ತಪ್ಪು ಉತ್ತರಕ್ಕೆ ಕಳೆಯಲಾಗುತ್ತದೆ.

​ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಗಳಿಸಬೇಕಾದ ಅಂಕಗಳು

ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇಕಡ.40, EWS ಅಭ್ಯರ್ಥಿಗಳು ಕನಿಷ್ಠ ಶೇಕಡ.40, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ ಶೇಕಡ.30, ಪರಿಶಿಷ್ಟ ಜಾತಿ - ಶೇಕಡ.30, ಪರಿಶಿಷ್ಟ ಪಂಗಡ -ಶೇಕಡ.25 ಅಂಕಗಳನ್ನು ಸಿಬಿಟಿ ಪರೀಕ್ಷೆಯಲ್ಲಿ ಗಳಿಸಬೇಕು. PWD ಅಭ್ಯರ್ಥಿಗಳಿಗೆ ಶೇಕಡ.2 ಅಂಕಗಳ ವಿನಾಯಿತಿ ಇರುತ್ತದೆ.

5)​ಆರ್‌ಆರ್‌ಬಿ ಗ್ರೂಪ್‌ ಡಿ ಪರೀಕ್ಷೆ : ಹಂತ-2

ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ಅನುಗುಣವಾಗಿ ವರ್ಗಾವಾರು 1:3 ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಈ ಅನುಪಾತದಲ್ಲಿ ಬದಲಾವಣೆ ಮಾಡುವ ಹಕ್ಕು ನೇಮಕಾತಿ ಕೋಶಕ್ಕೆ ಇರುತ್ತದೆ. ದೈಹಿಕ ಸಾಮರ್ಥ್ಯ ಪರೀಕ್ಷೆ ಕಡ್ಡಾಯವಾಗಿರುತ್ತದೆ.


6)​ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಏನು ಇರುತ್ತವೆ?

ಪುರುಷ ಅಭ್ಯರ್ಥಿಗಳು 2 ನಿಮಿಷದಲ್ಲಿ 35 ಕೆಜಿ ಭಾರವನ್ನು 100 ಮೀಟರ್ ವರೆಗೆ ಒತ್ತೊಯ್ಯಬೇಕು.

ಪುರುಷ ಅಭ್ಯರ್ಥಿಗಳು 4-15 ನಿಮಿಷದಲ್ಲಿ 1000 ಮೀಟರ್ ಓಡಬೇಕು.

ಮಹಿಳಾ ಅಭ್ಯರ್ಥಿಗಳು 2 ನಿಮಿಷದಲ್ಲಿ 20 ಕೆಜಿ ಭಾರವನ್ನು 100 ಮೀಟರ್ ವರೆಗೆ ಒತ್ತೊಯ್ಯಬೇಕು.

 ಮಹಿಳಾ ಅಭ್ಯರ್ಥಿಗಳು 5-40 ನಿಮಿಷದಲ್ಲಿ 1000 ಮೀಟರ್ ಓಡಬೇಕು.

7)​ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪೈಕಿ ಮೆರಿಟ್‌ ಆಧಾರದಲ್ಲಿ ಹುದ್ದೆಗಳಿಗೆ ಅನುಗುಣವಾಗಿ 1:2 ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಎಲ್ಲ ಅಗತ್ಯ ದಾಖಲೆಗಳನ್ನು ಸರಿಯಾಗಿ ಸಬ್‌ಮಿಟ್‌ ಮಾಡಿದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಹುದ್ದೆ ಸಿಗಲಿದೆ.



logoblog

Thanks for reading ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಆಯ್ಕೆ ಪ್ರಕ್ರಿಯೆಗಳೇನು? ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?

Previous
« Prev Post

1 comment: