RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Wednesday, December 28, 2022

Why do we celebrate 26th November as Constitution Day?

  SHOBHA       Wednesday, December 28, 2022

 Why do we celebrate 26th November as Constitution Day?


ಭಾರತದ ಸಂವಿಧಾನ ಸಭೆಯನ್ನು---ರಲ್ಲಿ ಸ್ಥಾಪಿಸಲಾಯಿತು?


ಎ) 1946 

ಬಿ) 1947

ಸಿ) 1948

ಡಿ) 1949



ಭಾರತದಲ್ಲಿ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26ರಂದು ಆಚರಿಸಲಾಗುತ್ತದೆ. ಭಾರತದ ಸಂವಿಧಾನವ ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳ ಅರಿವು ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ.

ಭಾರತವು ಸ್ವತಂತ್ರ ರಾಷ್ಟ್ರವಾದ ನಂತರ ಸಂವಿಧಾನ ರಚನಾ ಸಭೆಯು ಡಾ.ಭೀಮರಾವ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಮಿತಿಗೆ ಸಂವಿಧಾನವನ್ನು ರಚಿಸುವ ಕೆಲಸವನ್ನು ವಹಿಸಿಕೊಟ್ಟಿತು. 

ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು. 1948ರ ಆರಂಭದಲ್ಲಿ ಡಾ.ಅಂಬೇಡ್ಕರ್ ಅವರು, ಭಾರತೀಯ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು ಮತ್ತು ಅದನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದರು, ನವೆಂಬರ್ 26, 1949ರಂದು ಈ ಕರಡನ್ನು ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಯಿತು.

ಭಾರತೀಯ ಸಂವಿಧಾನವು ನವೆಂಬರ್ 26, 1949 ರಂದು ಅಂಗೀಕಾರವಾಯಿತು. 

ಭಾರತೀಯ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.

ಭಾರತದ ಸಂವಿಧಾನದ ವೈಶಿಷ್ಟ್ಯ:

ಭಾರತದ ಸಂವಿಧಾನವು ಬ್ರಿಟನ್, ಐರ್ಲೆಂಡ್, ಜಪಾನ್, ಯುಎಸ್‌ ಎ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಿಂದ ವೈಶಿಷ್ಟ್ಯಗಳನ್ನು ಎರವಲು ಪಡೆದುಕೊಂಡಿದೆ. 

ಭಾರತದ ಸಂವಿಧಾನ ಸಭೆಯನ್ನು 1946 ರಲ್ಲಿ ಸ್ಥಾಪಿಸಲಾಯಿತು. 

ಭಾರತ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು 18 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಯಿತು.

ಭಾರತದ ಸಂವಿಧಾನವು ಕೈಬರಹದ ದಾಖಲೆಯಾಗಿದೆ. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಕೈಬರಹದ ದಾಖಲೆಗಳಲ್ಲಿ ಒಂದಾಗಿದೆ. 

ಇಂಗ್ಲಿಷ್ ಆವೃತ್ತಿಯಲ್ಲಿ ಒಟ್ಟು 1,17,369 ಪದಗಳಿವೆ.

ಆರಂಭದಲ್ಲಿ ಸಮಾಜವಾದಿ ಎಂಬ ಪದವು ಭಾರತೀಯ ಸಂವಿಧಾನದ ಪ್ರಿಯಾಂಬಲ್ (ಪೀಠಿಕೆ) ಭಾಗವಾಗಿರಲಿಲ್ಲ. 

ತುರ್ತು ಪರಿಸ್ಥಿತಿಯ ಸಮಯದಲ್ಲಿ 1976ರ 42ನೇ ತಿದ್ದುಪಡಿ ಕಾಯಿದೆಯ ಮೂಲಕ ಆ ಪದವನ್ನು ಸೇರಿಸಲಾಯಿತು. 

ಇದು ಪೀಠಿಕೆಗೆ ಇದುವರೆಗಿನ ಏಕೈಕ ತಿದ್ದುಪಡಿಯಾಗಿದೆ.

ಭಾರತೀಯ ಸಂವಿಧಾನದ ಮೂಲ ರಚನೆಯು ಭಾರತ ಸರ್ಕಾರದ ಕಾಯಿದೆ 1935ರ ಮೇಲೆ ನಿಂತಿದೆ.

ಸಂವಿಧಾನದ ಪ್ರಕಾರ ಜನವರಿ 24, 1950ರಂದು ನಡೆದ ವಿಶೇಷ ಅಧಿವೇಶನದಲ್ಲಿ ಅಸೆಂಬ್ಲಿಯು ಡಾ.ರಾಜೇಂದ್ರ ಪ್ರಸಾದ್ ಅವರನ್ನು ಭಾರತೀಯ ಗಣರಾಜ್ಯದ ಮೊದಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.

ಸಂವಿಧಾನದ ಮೂಲ ಕೈಬರಹದ ಪ್ರತಿಗಳನ್ನು ಸಂಸತ್ ಭವನದ ಭಾರತೀಯ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಈ ಸಂವಿಧಾನವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತದೆ ಮತ್ತು ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಭ್ರಾತೃತ್ವವನ್ನು ಉತ್ತೇಜಿಸುವ ಗುರಿಯನ್ನು ರಚಿಸುವಲ್ಲಿ ಪ್ರಮುಖ ಹೊಂದಿದೆ. 

ಭಾರತೀಯ ಸಂವಿಧಾನವನ್ನು ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.

ಭಾರತದ ಸಂವಿಧಾನವನ್ನು ನವೆಂಬರ್ 26 ರಂದು ಆಂಗೀಕರಿಸಿದ ಸ್ಮರಣಾರ್ಥವಾಗಿ ಪ್ರತಿವರ್ಷ ಸಂವಿಧಾನದ ದಿನವನ್ನಾಗಿ ಆಚರಿಸಲಾಗುತ್ತಿದೆ. (ದಿನ ಮೊದಲಿಗೆ ರಾಷ್ಟ್ರೀಯು ಕಾನೂನು ದಿನಾಚರಣೆ ಎಂದು ಕರೆಯಲಾಗುತಿತ್ತು)

63,96,729 ರೂ ವೆಚ್ಚದಲ್ಲಿ 11 ಬೈಠಕ್‌ಗಳಾಗಿ 2,473 ತಿದ್ದುಪಡಿಗಳನ್ನು ಒಳಗೊಂಡ 1,615 ತಿದ್ದುಪಡಿಗಳ ವಿಮರ್ಶೆಗಳನ್ನು ಸ್ವೀಕರಿಸಿ 7ಜನರ ಸದಸ್ಯ ಪೀಠವು ಸಂವಿಧಾನವನ್ನು ಸಂಸತ್ತಿನ ಕೈಗಿಟ್ಟಾಗ ಜನವರಿ 26, 1950ರಂದು ಭಾರತವು ನಿಜವಾಗಿ ಸ್ವತಂತ್ರವಾಯಿತೆಂದು ಘೋಷಿಸಲ್ಪಟ್ಟಿತು.

ನವೆಂಬರ್ 19, 2015 ರಂದು ಭಾರತ ಸರಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಿತು. 

2015ರ 11 ಅಕ್ಟೋಬರ್ ರಂದು ಅಂಬೇಡ್ಕರ್ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆಯನ್ನು ಮಾಡಿದರು. ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರ್ ರವರ ವಿಚಾರಗಳನ್ನು ಹರಡಲು ನವೆಂಬರ್ 26ರನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.

logoblog

Thanks for reading Why do we celebrate 26th November as Constitution Day?

Previous
« Prev Post

No comments:

Post a Comment